Wednesday, September 14, 2011

Support Watchers Raincoat Program - Report.

YEAR: 2011 -12

DATE: JUNE & JULY 2011

OBJECTIVE: To support, encourage and motivate the forest watchers in saving our forests by recognition, appreciation and support for their work.

PERSPECTIVE: With the need to conserve our forests becoming important and complex with the passing days, it becomes equally important to strengthen ourselves to protect them. The Forest department staff frame the first protectors of these precious and essential natural resources and they are to be supported in every way. Among these staff, the forest watchers are the lowest among the ranks but the most important and front end warriors when it comes to saving the forests and wildlife. These watcher posts can be basically classified as Permanent watcher (PW), Petty Cash Payment (PCP) or Monthly Rated (MR) watchers. Majority of them are either temporary PCP or MR based, some of whom have covered more than 25 years of forest service. These watchers spend their life in remote Antipoaching camps that are situated deep inside the forests. With a duty extending 24 x 7, these watchers put their lives at stake to protect the natural resources.


Duty in the forest is highly risky for these watchers with danger to life from wild animals, poachers, smugglers and forest fires. Fighting the poachers and smugglers bare handed, dealing with NTPF (Non Timber Forest Products) collectors and cattle grazers and putting off forest fires during summer which almost all of them are human induced, often puts them into conflicts with their own neighbours as these watchers are recruited from villages and tribal settlements that border the forests. Getting paid a mere Rs. 160 per day, with a non permanent, risky job, leading life is rather a day to day challenge for these hard core protectors. Staying away from family for months together, their
interest, motivation and commitments are the only things that drive them in doing their duties.

So, as a first step to support them, we started this program of issuing rain coats which not only helps them in doing their duty comfortably in the rains, but also be encouraged by the fact that their work is being recognized and supported.

WHERE TO DISTRIBUTE THE RAINCOATS?

We initially had the thought of distributing the raincoats at the two major Tiger reserves, Bandipur and Nagarahole, but these two reserves get enough grants and support both from the government and many NGOs working in and around them. Other reserved forests and wildlife sanctuaries like Brahmagiri, Pushpagiri, Talacauveri, which form a major part of the Nilgiri biosphere are equally neglected maybe with the fact that they are not Tiger reserves. These sanctuaries are home for several rare species endemic to the Western Ghats like the Lion Tailed Macaque, Nilgiri Languor, Malabar large spotted civet, several of the Laughing thrushes, Malabar Grey Hornbill, Giant flying squirrel, Nilgiri Marten, Malabar Banded Peacock and also are home for more than 60% of the elephant population in our state.
This region is also the birth place of the sacred river Cauvery and many other small streams like the Ramatirtha, Lakshmanatirtha which in their course of flow feed lakhs of acres of farm land and provide drinking water for millions of people.

These factors make these ranges as important and essential as any tiger reserve and we concluded on these ranges for our program. These forests receive heavy rains from the South east monsoons that hit every year during the months of May to September and it’s a rather herculean task to patrol in that weather. Hence it was an essential location for us to give rain coats to watchers in these areas.


COLLECTION OF FUNDS:

We started this program with very small expectations as it was our very first one but were overwhelmed by the response and support by friends and concerned individuals. We are not sure whether it was a mark of trust on us or the concern people had about our watchers, but all in all it was a grand success that we managed to collect a decent amount enough to buy a raincoat for watchers in all the three sanctuaries, Brahmagiri, Pushpagiri and Talacauveri. From contributions through friends and donors we collected a total amount of Rs. 27, 850.00 (Twenty seven thousand eight hundred and fifty)



List of contributors supporting the program:

Yashwanth B N
Guruprasad Timmapur
Pradeep
Anand Bheemaraju
Rohan Aradhya
Sunil Gaikwad
Vandana Radhakrishna Bhat
Ajith Bhat
Neeshath EK
Bharathram N
Harsha
Vishwadutta
Jayaprakash
Kiran B Goudar
Vijay Srinath
Prabhanjana
Sudhindra A
Ambareesh Karanth
Parvathy S.N
Pramod Mahajan
Krishna Dasappanavar
Vishal
Abhiram Iyer
Santhosh S L




At the beginning of the campaign, we had enquired on the Toad rain suits price to be around the range of Rs. 600 to Rs. 650. But with the available funds, we could manage only one of the three forest ranges. After negotiation and enquiring around we settled on the Single breasted type rain coats available at the rate of Rs. 310 which enabled us to complete all the three forest ranges. These coats are more convenient to wear and also to carry additional baggage in the forest, protecting it from rain.



DISTRIBUTION:

The raincoats were distributed for department personnel below the guard level. Watchers belonging to PCP, MR and permanent divisions and forest guards serving in 20 antipoaching camps of the three wildlife sanctuaries have been benefitted by this program. The distribution was carried out in two stages. During the first stage, raincoats were distributed at Brahmagiri Wildlife sanctuary – Srimangala and Makuta forest ranges on the 25th and 26th of June 2011. Totally 21 forest personnel were included during this phase.


We carried out the second phase of distribution at the Talacauveri and the Pushpagiri wildlife sanctuaries on the 8th and 9th of July 2011. 67 forest personnel of the two ranges were covered in this phase to finish the distribution. The complete transport cost for the distribution was borne by ‘Wildlife Conservation Society - India Program’, who have supported us in all aspects through out this raincoat distribution task.















Total number of watcher benefited (PCP+MR+PW): 76
Total no. of guards: 12
Total number of raincoat distributed: 88









CONCLUSION:

It was a wonderful program for us, distributing the rain coats to these watchers. We are hopeful that this small contribution from all of us to the watchers would indeed raise their spirits that there are people out there who rightly recognize their work and are always on their side to support, motivate and encourage them in their and our endeavour to protect our threatened forests and wildlife.

• First of all we would like to thank all our contributors who trusted us and helped this program to be a grand success beyond expectation. We are hopeful that atleast a few among you would take initiative and join us in future conservation activities.

• We thank Mr.Motappa, DCF, Madikeri Forest Division, Mr. Srinivas Nayak, RFO, Srimangala range, Mr. Narasimha Shetty, RFO, Makuta range, Mr. Uttappa, RFO, Talacauveri range and Mr. Paul Antony, RFO, Pushpagiri range and all the department staff who have supported us in this program and has provided all the facilities to make it a success.

• We sincerely thank Mr. Sanjay Gubbi, Asst. Director, Wildlife Conservation Society – India Program and his staff for the constant guidance, support and encouragement for all our activities.

Friday, May 27, 2011

Support Forest Watchers....



The huge cry to save the forest and tiger has echoed every nook and corner of the world but ever wonder who really is saving them? Meet the watchers, the true soldiers fighting with their lives at stake. These are the Monthly Rated (MR) and Petty Cash Payment (PCP) workers who form the lowest rank but the front end warriors in saving our endangered forests and wildlife. Wearing an old khaki uniform to protect from the burning sun, the chilling winters or the rains, bare footed with a stick to fight the smugglers, poachers and forest fires, spending most of their lives in remote anti poaching camps with bare minimum facilities, getting paid the minimum wages to support their families and bring up their children in this competitive world, these watchers have no motivation to work but still are sincere and committed.

These bare foot warriors are to be supported, encouraged and motivated and this can be done by a mere recognition, appreciation and support of the hard work they do. A small support is worth a million cries to save the tiger!

Here is an opportunity for you to contribute to their work. Aranya Wildlife Trust plans to distribute rain coats to these watchers in the Brahmagiri, Pushpagiri and Makuta forest ranges before the monsoons. Sponsor for a raincoat and help these watchers in their fight. You can contribute for a minimum of one raincoat. Each raincoat costs us Rs.600/-.

Aranya is a registered trust and each contribution will be accounted with a receipt. Online transfers can also be done to the bank details given below. For correspondence, please cote “Support forest watchers – Raincoat program” with your name and correspondence details.

Your small contribution can make a lot of changes. Here is a chance to do it.

Bank details -
Bank                - State Bank of India.
Branch             - Basaveshwara Nagar, B’lore.
Current A/c No – 31735823123
IFSC Code        - SBIN0009049 (for NEFT Transfer purpose)

You can also draw a cheque or DD in the name of Aranya Wildlife Trust, Payable at Bangalore.

Request you to drop us a mail at Aranyawildlifetrust@gmail.com with details of your donation or SMS us at +91-9845479329 so that we confirm receipt of your amount - Thank you.

Tuesday, May 24, 2011

The Cheerathe Story




The leopard is a member of the cat family and the smallest of the four "Big Cats” the other three being the Tiger, Lion, and Jaguar.  The leopard was once bountifully distributed across eastern and southern Asia and Africa, but over the period of times its range of distribution has diminished drastically.  This is largely attributed to hunting and loss of habitat. It is now partly found in parts of Africa; there are also fragmented populations of the species in Indonesia, Pakistan Sri Lanka, Malaysia, China & India... The rapid declining range and population has raised a global panic trigger and the leopard is now classified as a “Near Threatened" species.

After all the hype and hoopla the Tiger enjoyed, its time the spotlight shifts to the the smaller member of the clan, The alarming rate and which this cat has been decimated raises a lot of eyebrows The crux of the problem being the re-drawing of boundaries between men & the wild, A clear case of conflict of interest, encroachment, de-forestation and diminishing of feeder line. And above all rapid urbanization.

About me……
Leopards are versatile, opportunistic hunters, elusive, solitary and largely nocturnal.  Activity level varies depending on the habitat and the type of prey that they hunt... Forest leopards are also more specialized in prey selection and exhibit seasonal differences in activity patterns Leopards are known for their ability in climbing, and have been observed resting on tree branches during the day, dragging their kills up trees and hanging them there, and descending from trees headfirst, They are powerful swimmers, although not as strong as some other big cats, such as the tiger. They are very agile, and can run at over 58 kilometers per hour leap over 6 meters They produce a number of vocalizations, including grunts, roars and  growls, the territory of a male leopard may extend unto 30 kames They are very diverse in size. Males are about 30% larger than females, and weigh 30 to 90 kg. The female variant weighs a max of up to 60 kgs. The leopard has a very broad diet. They feed on a greater diversity of prey than other members of the cat family, and will eat anything.  In Asia, the leopard preys on deer such as chital, as well as various Asian antelopes. Prey preference estimates in southern India showed that the most favored prey of the leopard was the chital they select their prey focusing on small herds, dense habitat, and low risk of injury, preferring prey weights of 10 to 40 kg only. Leopards must compete for food and shelter with other large predators such as lions, tigers, spotted hyenas, these animals may steal the leopard's kill or devour its young. Leopards live alongside other predators by hunting for different types of prey and by avoiding areas frequented by them. depending on the region, leopards may mate all year round gestation period lasts for 90 to 105 days Cubs are usually born in a litter of 2–4 cubs with mortality rate as high as 40- 50 % in the first year. Females give birth in a cave, boulders, hollow tree, and t to make a den. Cubs are born with closed eyes, which open four to nine days after birth. The fur of the young tends to be longer and thicker than that of adults. Their pelage is also grayer in color with less defined spots. Around three months of age, the young begin to follow the mother on hunts. At one year of age, leopard young can probably fend for themselves, but remain with the mother for 18–24 months.


Why Me ……
ü  Consumerism: The ever increasing Chinese demand for animals for fulfilling their economic compulsions.
ü  Visibility –There is increased value for leopard shins, claws, bones, and penises because it is getting much harder to catch tigers
ü  Habitat – Unlike tigers which prefer the confines of the deep jungle, nocturnal and solitary leopards can adapt easily to a variety of landscapes, and that unfortunately includes the fringes of human settlements.
ü  Conflict in interest -  While poachers are responsible for supplying at least half of all leopard skins and parts to china leopards killed by farmers and landowners provide another source, As leopard habitat shrinks more of the predators are attacking livestock’s for food, and here they cross the line.
ü  Man Eating - Most leopards avoid people, but humans may occasionally be targeted as prey. Most healthy leopards prefer wild prey to humans, but injured, sickly, or struggling cats with a shortage of regular prey may resort to hunting humans and become habituated to it.
ü  Because of his smaller size he can conceal himself in places impossible to a tiger, his need for water is far less, and in veritable demoniac cunning and daring, coupled with the uncanny sense of self preservation and stealthy disappearance when danger threatens, he has no equal.

Some Gyan ……..

ü  Leopards often take up residence in croplands and tea-gardens.
ü  They do not usually attack people on the contrary they avoid them.
ü  Wild cats may attack in self defense; it’s advisable to avoid provoking them.
ü  Sighting of leopards in the vicinity of human habitations does not necessarily means that the animal has strayed out of his or her domain.
ü  Arbitrary removal of cats could lead to increase in conflict; the space by the captured cat could be soon occupied by his peers.
ü  Long term solutions should focus more on better sanitation, measures to include proper waste disposal in villages and towns to keep a check to domesticated animals like dogs, pigs etc.
ü  Construction of secure and strong sheds by farmers to protect their live stocks would go a long way in avoiding stray attacks by wild cats.





The way ahead ………….
ü  Training to be imparted to field staff who can handle emergencies where conflict arises between man and leopard.
ü  Implanting micro chips to captured leopard to understand their movement before and after translocation.
ü  Awareness campaign to avoid capture of the cat.
ü  Initiating research on leopards living in human-dominated landscapes, to
ü  Understand the dynamics of human-leopard conflict.
ü  Frequent media interactions and conservation programs.
ü  Proper handling of captured animal – Reallocation based on fitness.
ü  Management of the cat should be based on systematic long term data where incidence of conflict arise – data to be analyzed for proper decision making.
ü  Research based on population and abundance of leopards in conflict areas to be done on a war footing basis.
ü  Separate guidelines to deal with man eating wild cats.
ü  Protocols to be followed in case of leopard attack.

  
      
Message

Humans, animals and plants as science rightly says are all important elements of the environment, one upmanship by any of the three may lead to the catharsis of the environment. The destruction of forests and other habitats is causing the extinction of various plants and animals every day. We know that all species are important for maintaining ecological balance. If one is lost, the whole natural environment changes. In order to protect the environment from being spoilt, we should therefore protect our wildlife. Mankind must develop a concern for wild creatures and a determination that these wild species will not perish". We should save the earth's wild creatures to save ourselves. To be kind to animals is to be kind to mankind.


Written by - Neeshath E K 
Member - Aranya Wildlife Trust

Sources - Moef website, various NGO websites.
Photo - Prashant GY

Friday, May 20, 2011

ಗುಬ್ಬಚ್ಚಿ


ಚಿತ್ರ - ಪ್ರಶಾಂತ ಯಾವಗಲ್


ಗುಬ್ಬಚ್ಚಿ ಅಂದಾಕ್ಷಣ ನಮ್ಮ ಮನೆಯ ದೇವರ ಫೋಟೋಗಳ ಹಿಂದೆ, ತಾತ ಅಜ್ಜಿಯಂದಿರ ಫೋಟೋಗಳ ಹಿಂದೆ ಗೂಡು ಕಟ್ಟಿ, ನಮ್ಮಮ್ಮ, ಅಜ್ಜಿ ಕಾಳು-ಕಡಿಗಳನ್ನು ಸ್ವಚ್ಚಗೊಳಿಸುವಾಗ ಬಿದ್ದ ಕಾಳು-ಕಡಿಗಳನ್ನು ತಿಂದು ಸಂಸಾರ ದೂಗಿಸುತ್ತಿದ್ದ ಪುಟ್ಟ ಹಕ್ಕಿಗಳು ಕಣ್ಣಿನ ಮುಂದೆ ಬರುತ್ತವೆ. ಈ ಹಕ್ಕಿಗಳು ಎಲ್ಲೆಂದರಲ್ಲಿ ಕಾಣುತ್ತಿದ್ದವು. ಮನೆಯ ಫೋಟೋಗಳ ಹಿಂದೆ, ಮನೆಯ ಜಂತಿಗಳ ಮೇಲೆ, ಮಣ್ಣಿನ ಗೋಡೆಗಳ ಚಿಕ್ಕ ಪೊಟರೆಗಳಲ್ಲಿ, ಮಾರುಕಟ್ಟೆಯ ಕಿರಾಣಿ ಅಂಗಡಿಗಳಲ್ಲಿ ಕೂಡಿಟ್ಟ ಕಾಳಿನ ಚೀಲದಲ್ಲಿ, ನಮ್ಮ ಶಾಲೆಯಲ್ಲಿ ಹೀಗೆ ಎಲ್ಲೆಲ್ಲು ಚಿಂವ ಚಿಂವ ಎಂಬ ಶಬ್ದ ಕೇಳುತ್ತಿತ್ತು. ಮೇಷ್ಟ್ರು ಬರದಿದ್ದರೆ, ಗುಬ್ಬಚ್ಚಿ ಹಿಡಿಯುವ ಸಲುವಾಗಿ ಎಲ್ಲ ಕಿಟಕಿ, ಬಾಗಿಲು ಮುಚ್ಚಿ ಹರಸಾಹಸ ಪಟ್ಟು ಹಿಡಿಯುತ್ತಿದ್ದೆವು, ಹೀಗೆ ಮಾಡುವಾಗ ಸಿಕ್ಕಿಬಿದ್ದು ಸಾಕಷ್ಟು ಸಾರಿ ಗುರುಗಳ ಕೋಲಿನ ರುಚಿಯನ್ನು ನೋಡಿದ್ದಾಗಿದೆ. ರಾತ್ರಿ ಹೊತ್ತು ಅಜ್ಜಿಯ ಕಥೆಗಳಲ್ಲಿ ರಾಮಾಯಣ, ಮಹಾಭಾರತದ ಕಥೆಗಳೆಂದರೆ ಇಷ್ಟ ಆದರೆ ನಮಗೆ ಗುಬ್ಬಕ್ಕನ, ಕಾಗಕ್ಕನ ಕಥೆಗಳು ನಿದ್ದೆ ಬರಲು ಸಹಾಯ ಮಾಡುತ್ತಿದ್ದವು.

ಆಗಲು ಕೂಡ ಕೆಲವು ಅಲೆಮಾರಿ ಜನ ಇವುಗಳ ಬೇಟೆಯನ್ನಾಡುತ್ತಿದ್ದರು, ಬೇಟೆ ಆಡುವವರನ್ನು ಕಂಡರೆ ನಮ್ಮೂರಲ್ಲಿ ಹಿರಿಯರು ಬೈದು ಓಡಿಸುತ್ತಿದ್ದರು. ರಜೆ ಅಂತ ಇದ್ದರೆ, ಸುಗ್ಗಿಯ ಕಾಲದಲ್ಲಿ ಗುಬ್ಬಚ್ಚಿ ಓಡಿಸುವುದು ನಮ್ಮ ಒಂದು ಮುಖ್ಯ ಕೆಲಸವಾಗಿರುತ್ತಿತ್ತು. ಅವಾಗ ಇನ್ನು ಪ್ಲಾಸ್ಟಿಕ ನಿಧಾನವಾಗಿ ನಮ್ಮ ಜೀವನದಲ್ಲಿ ಕಾಲು ಇಡುತ್ತಿದ್ದ ಸಮಯ. ಇದನ್ನೇ ಒಂದು ಕೋಲಿಗೆ ಕಟ್ಟಿ ಬೆದರು ಬೊಂಬೆಗೆ ಪರ್ಯಾಯವಾಗಿ ಉಪಯೋಗಿಸುತ್ತಿದ್ದೆವು. ಪ್ಲಾಸ್ಟಿಕ್ ಮಾಡುವ ಸದ್ದಿಗೆ ಗುಬ್ಬಿಚ್ಚಿಗಳ ಗುಂಡಿಗೆ ನಿಂತು ಹೋಗುತ್ತಿದ್ದ ಕಾಲ ಅದು. ಗುಬ್ಬಚ್ಚಿಗಳು ವ್ಯವಸಾಯದ ಉತ್ಪನ್ನಗಳ ಮೇಲೆ ಅವಲಂಬಿಸಿದ್ದರಿಂದ ಮತ್ತು ಸುಮಾರು ಭಾಗದ ಉತ್ಪನ್ನವನ್ನ ತಿಂದು ಮುಗಿಸುತ್ತಿದ್ದರಿಂದ ಇವುಗಳನ್ನು ರೈತ ಶತ್ರು ಎಂದು ಕೂಡ ಕಾಣಲಾಗುತ್ತಿತ್ತು, ಆದರೂ ನಮ್ಮ ಹಿರಿಯರು ಪ್ರಕೃತಿಯನ್ನು ಪ್ರಿತಿಸುವವರಾದ್ದರಿಂದ ಅವುಗಳ ಮಾರಣ ಹೋಮಕ್ಕೆ ಎಂದು ಪ್ರಯತ್ನಿಸಿರಲಿಲ್ಲ. "ಬದುಕು ಬದುಕಲು ಬಿಡು" ಎಂಬ ಧೋರಣೆ ಅವರದು. ಇವತ್ತಿಗೂ ಕೂಡ ಯಾರು ಗುಬ್ಬಚ್ಚಿಗಳ ಮಾರಣ ಹೋಮ ಮಾಡದಿದ್ದರೂ ಕೂಡ ಅವುಗಳ ಉಳಿವು ಸಾಧ್ಯವಾಗುತ್ತಿಲ್ಲ ಕಾರಣ ಹಲವಾರು. ನಮ್ಮ ಮನೆಯ ನಾಯಿ ಬೆಕ್ಕುಗಳಿಗೆ ಆಗಾಗ ಗುಬ್ಬಚ್ಚಿಯ ಮಾಂಸದ ರುಚಿ ನೋಡಲು ಕೊರತೆಯಿರಲಿಲ್ಲ. ಹೀಗೆ ಗುಬ್ಬಚ್ಚಿಗಳು ಒಂದು ಕಡೆ ನಮಗೆ ಕಥೆಯಾದರೆ, ಇನ್ನೊಂದು ಕಡೆ ಅಮ್ಮ ಎಸೆದ ಬೇಡವಾದ ಕಾಳುಗಳನ್ನು ಸ್ವಚ್ಚಗೊಳಿಸುವ, ಮನೆಯಲ್ಲಿರುವ ಕ್ರೀಮಿ-ಕೀಟಗಳನ್ನು ತಿನ್ನುವ, ನಮ್ಮ ನಾಯಿ ಬೆಕ್ಕುಗಳಿಗೆ ಆಹಾರವಾಗುವ ಪರಿಸರ ಸಮತೋಲದ ಕೆಲಸ ಮಾಡುತ್ತಿದ್ದವು.

ಒಂದು ಸಮಯದಲ್ಲಿ ಜಗತ್ತಿನ್ನಾದ್ಯಂತ ಕಾಣಸಿಗುತ್ತಿದ್ದ ಈ ಪುಟ್ಟ ೨೫ ರಿಂದ ೪೦ ಗ್ರಾಂ ತೂಗುವ ಹಕ್ಕಿಗಳು ಇಂದು ಮಾಯವಾಗಲು ಹಲವಾರು ಕಾರಣಗಳಿವೆ. ಪ್ರತಿಯೊಬ್ಬ ಮನುಷ್ಯನಿಗೆ ಹೇಗೆ ಆವಾಸಕ್ಕೆ ಮತ್ತು ಆಹಾರಕ್ಕೆ ಕೊರತೆ ಆದರೆ ಬದುಕಲು ಅಸಾಧ್ಯವೋ ಹಾಗೆ ನಮ್ಮ ಪ್ರಾಣಿ-ಪಕ್ಷಿಗಳು ಕೂಡ. ಮನುಷ್ಯ ತನಗೋಸ್ಕರ ಮಾತ್ರ ಯಾವಾಗ ಬದುಕಲು ಶುರು ಮಾಡಿದನೋ ಅಂದಿನಿಂದಲೇ ಅವನಿಗೆ ಬೇಕಾದ ದನ ಕರುಗಳನ್ನು ಬಿಟ್ಟು ಮಿಕ್ಕೆಲ್ಲ ಪ್ರಾಣಿ-ಪಕ್ಷಿಗಳ ಬಗ್ಗೆ ಕನಿಕರ ತೋರಿಸದೆ ಅವುಗಳ ಆವಾಸದ ಮೇಲೆ ಮತ್ತು ಆಹಾರದ ಮೇಲೆ ತೀವ್ರ ಪರಿಣಾಮ ಬಿಳುವಂತೆ ಮಾಡತೊಡಗಿದ. ಇದರಿಂದ ಜೀವಿಸಲು ಆಗದೆ ಅದೆಷ್ಟೋ ಅಮೂಲ್ಯ ಜೀವಗಳು ಕಣ್ಮರೆಯಾದವು. ಇಂದು ಪ್ರಕೃತಿ ಈ ಮಟ್ಟಕ್ಕೆ ಬದಲಾವಣೆಯಾಗಲು ಇದೇ ಕಾರಣ.

ಮನುಷ್ಯನ ಪ್ರಗತಿಯ ಓಟ ಜನಸಂಖ್ಯೆ ಹೆಚ್ಚಾದಂತೆಲ್ಲ ಹುಚ್ಚಾಗಿ ಓಡತೊಡಗಿತು. ಮಣ್ಣು ಮತ್ತು ಕಲ್ಲಿನ ಜಾಗದಲ್ಲಿ, ಸಿಮೆಂಟಿನ, ಇಟ್ಟಿಗೆಯ ಮನೆಗಳು ಬೆಳೆದು ನಿಂತವು. ಇವುಗಳು ಗುಬ್ಬಚ್ಚಿಗಳ ಮನೆಯನ್ನು ಕಸಿದುಕೊಂಡರೆ. ನಮ್ಮ ಮನೆಯ ಬಾಗಿಲಿಗೆ ಪರಿಷ್ಕರಿಸಿದ ಧವಸ ಧಾನ್ಯಗಳು ಪ್ಲಾಸ್ಟಿಕ್ ಚೀಲದಲ್ಲಿ ಬಂದುದರಿಂದ ಗುಬ್ಬಚ್ಚಿಗಳ ಆಹಾರದ ಮೇಲೆ ದೊಡ್ಡ ಪೆಟ್ಟು ಬಿತ್ತು. ಇದು ಸಾಲದೆಂಬಂತೆ ನಮ್ಮ ಮನೆಗಳ ಸುತ್ತ ಇದ್ದ ಹಸಿರು ಮಾಯವಾಗಿ ಸಿಮೆಂಟಿನ ಕಾಡು ಬೆಳೆಯಿತು. ಹಸಿರು ಮಾಯವಾದಾಗ ಕ್ರೀಮಿ-ಕೀಟಗಳು ಮಾಯವಾದವು. ಇನ್ನು ಬದುಕಲು ಗುಬ್ಬಚ್ಚಿಗಳಿಗೆ ಉಳಿದದ್ದು ಕಾಡು ಮತ್ತು ಹಳ್ಳಿಗಳು. ಹೀಗಾಗಿ ಇಂದು ನಮ್ಮ ನಗರಗಳಲ್ಲಿ ಗುಬ್ಬಚ್ಚಿಗಳು ಮಾಯವಾಗಿವೆ. ನೋಡಲು ಹಳ್ಳಿ ಇಲ್ಲವೇ ಕಾಡುಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಈಗ ಹಳಿಗಳಲ್ಲೂ ಇವು ಕಾಣದಂತಾಗುವ ಅಪಾಯ ಬಂದೊದಗಿದೆ, ಅದೇನು ಎಂದರೆ ನಮ್ಮ ಕೃಷಿಕರು ಉಪಯೋಗಿಸುವ ರಾಸಾಯನಿಕ ಗೊಬ್ಬರ ಗುಬ್ಬಚ್ಚಿಗಳ ಜೀವ ತೆಗೆದುಕೊಳ್ಳುತ್ತಿವೆ. ಮೊಬೈಲ್ ಟಾವರ ಹಾವಳಿಯಿಂದ ಗುಬ್ಬಿಗಳು ಮಾಯವಾಗುತ್ತಿವೆ ಎಂಬ ಸುದ್ದಿಗೆ ವೈಜ್ಞಾನಿಕವಾಗಿ ಯಾವುದೇ ಪುರಾವೆಗಳಿಲ್ಲ. ಇನ್ನು ನೀರಿನ ಬಗ್ಗೆ ಹೇಳುವುದಾದರೆ ನಮ್ಮ ಹಳೆಯ ಮನೆಗಳಲ್ಲಿ ನೀರಿನ ಹೂಜಿಗಳಿರುತ್ತಿದ್ದವು. ಅವುಗಳು ಮತ್ತು ಬಾವಿಗಳು, ಕೆರೆ ಮತ್ತು ಕಾಲುವೆಗಳು ಪ್ರಾಣಿ ಪಕ್ಷಿಗಳ ನೀರಿನ ದಾಹವನ್ನು ತಿರಿಸುತ್ತಿದ್ದವು, ಆದರೆ ಇಂದು ನಮ್ಮ ಕೆರೆಗಳು ಬತ್ತಿಹೋಗಿವೆ, ಬಾವಿಗಳ ಜಾಗದಲ್ಲಿ ಕೊಳವೆ ಬಾವಿಗಳ ಹಾವಳಿ ಹೆಚ್ಚಾಗಿದೆ, ಕಾಲುವೆಗಳ ಜಾಗದಲ್ಲಿ ಕೊಳವೆಗಳ ಮೂಲಕ ನೀರು ಹರಿಯುತ್ತದೆ, ಹೂಜಿಗಳ ಜಾಗದಲ್ಲಿ ಸಿಂಟ್ಯಾಕ್ಸ್ ಟ್ಯಾಂಕುಗಳು ನಮ್ಮ ಮನೆಗಳ ಮೇಲೆ ರಾರಾಜಿಸುತ್ತಿವೆ.

ಮೊಹಮ್ಮದ ದಿಲಾವರ ಎಂಬ ಯುವಕ ಈ ಗುಬ್ಬಚ್ಚಿಗಳ ಉಳಿವಿಗಾಗಿ "ನೆಚರ ಫಾರೆವರ್ ಸೊಸೈಟಿ" ಎಂಬ ಸಂಸ್ಥೆ ಕಟ್ಟಿಕೊಂಡು ಹೋರಾಡುತ್ತಿದ್ದಾರೆ. ಇವರು ಹೇಳುವ ಪ್ರಕಾರ "ಗುಬ್ಬಚ್ಚಿಗಳು ನಗರ ಮತ್ತು ಹಳ್ಳಿಗಳ ಜೀವ ವೈವಿಧಿತೆಯ ಸಂಕೇತ, ಗುಬ್ಬಚ್ಚಿಗಳು ಕ್ಯಾನರಿ ಎಂಬ ಹಕ್ಕಿಯು ಗಣಿ ಸುರಂಗಗಳಲ್ಲಿ ವಹಿಸುವ ಪಾತ್ರವನ್ನು ನಮ್ಮ ನಗರ ಹಳ್ಳಿಗಳಲ್ಲಿ ವಹಿಸುತ್ತವೆಯಂತೆ." ನಮ್ಮಲ್ಲಿ ಸುಮಾರು ಜನರಿಗೆ ಕ್ಯಾನರಿ ಹಕ್ಕಿಯ ಬಗ್ಗೆ ಗೊತ್ತಿಲ್ಲ. ಹಿಂದೆ ಇಂಗ್ಲೆಂಡ ಮತ್ತು ಅಮೇರಿಕಗಳಲ್ಲಿ ಸುರಂಗದಲ್ಲಿ ಕೆಲಸ ಮಾಡುವ ಗಣಿ ಕಾರ್ಮಿಕರು ಆಮ್ಲಜನಕದ ವ್ಯವಸ್ಥೆ ಇಲ್ಲದೆ ಈ ಹಕ್ಕಿಗಳ ಮೇಲೆ ಅವಲಂಬತಿರಾಗಿದ್ದರು. 
ಕ್ಯಾನರಿ ಹಕ್ಕಿ ಎಲ್ಲಿಯವರೆಗೂ ಹಾಡಿಕೊಂಡು ಇರುವುದೋ  ಅಲ್ಲಿಯವರೆಗೂ ಆಮ್ಲಜನಕ ದೊರೆಯುವುದೆಂದು ಮತ್ತು ಎಲ್ಲಿ ಅದು ಹಾಡುವುದನ್ನು ನಿಲ್ಲಿಸಿ ಸಾಯುವಂತೆ ಒದ್ದಾಡುವುದೋ ಅಥವಾ ಸಾಯುವುದೋ ಅಲ್ಲಿ ವಿಷಕಾರಿ ಅನಿಲಗಳಾದ ಮಿಥೇನ್ ಅಥವಾ ಕಾರ್ಬನ್ ಮೋನೋಕ್ಸೈಡ ಇದೆಯೆಂದು ತಿಳಿದು ತಮ್ಮ ಜೀವ ಕಾಪಾಡಿಕೊಂಡು ವಾಪಸಾಗುತ್ತಿದ್ದರು. ಅದೇ ರೀತಿ ಗುಬ್ಬಚ್ಚಿಗಳು ನಗರದ ಮತ್ತು ಹಳ್ಳಿಗಳ ಸ್ವಾಸ್ಥ್ಯದ ಪ್ರತಿಕವಾಗಿವೆ ಎಂದು ಹೇಳುತ್ತಾರೆ.

ಹಾಗೆ ನೋಡಿದರೆ ನಮ್ಮ ನರಗಳಿಂದ ಗುಬ್ಬಚ್ಚಿಗಳು ಮಾಯವಾಗಿ ವರ್ಷಗಳೇ ಕಳೆದಿವೆ. ಇದರರ್ಥ ನಮ್ಮ ನಗರಗಳ ಸ್ವಾಸ್ಥ್ಯ ಕೆಟ್ಟಿದೆಯೇ? ಹೌದು ಎನ್ನುತ್ತದೆ ನಮ್ಮ ಜೀವನಶೈಲಿ. ನಮ್ಮಲ್ಲಿ ಸುಮಾರು ಜನರಿಗೆ ಶ್ವಾಸಕೋಶದ ತೊಂದರೆ ಇದೇ, ಅಲರ್ಜಿಗಳೆಂಬ ಭೂತಗಳು ಎಲ್ಲರನ್ನು ಕಾಡುತ್ತಿವೆ. ಸ್ವಚ್ಚ ಗಾಳಿ ಇಲ್ಲ. ನೀರಿನ ಗುಣಮಟ್ಟ ಕೆಟ್ಟಿದೆ, ಕೊಳವೆ ಭಾವಿಗಳನ್ನು ಸಾವಿರ ಅಡಿ ಕೊರೆದರು ನೀರು ಸಿಕ್ಕುತ್ತಿಲ್ಲ. ಇವೆಲ್ಲ ಸಾಕಲ್ಲವೇ ನಮ್ಮ ಪರಿಸರದ ಗುಣಮಟ್ಟ ತೋರಲು. ನಾವುಗಳು ಇಗಲಾದರು ಎಚ್ಚೆತ್ತುಕೊಂಡು ನಮ್ಮ ಸುತ್ತ ಉಳಿದಿರುವ ೪ ಪ್ರತಿಶತ ಕಾಡನ್ನಾದರು ಉಳಿಸಿ ಬೆಳೆಸಬೇಕು. ನಮ್ಮ ಮನೆಗಳ ಮೇಲೆ ಪಕ್ಷಿಗಳಿಗಾಗಿ ಸ್ವಲ್ಪ ಕಾಳು ಮತ್ತು ನೀರಿನ ವ್ಯವಸ್ಥೆ ಮಾಡಿ ಇಡಬೇಕು. ನಮ್ಮ ಸುತ್ತ ಪ್ರಾದೇಶಿಕ ಸಸಿಗಳನ್ನು ಬೆಳೆಸಬೇಕು ಏಕೆಂದರೆ ನಮ್ಮ ಹಕ್ಕಿಗಳನ್ನು ಸೆಳೆಯುವಲ್ಲಿ ಇವುಗಳ ಪಾತ್ರ ಅತಿ ಮುಖ್ಯ. ವಿದೇಶಿ ಸಸಿಗಳು ನೋಡಲು ಅಂದವಾಗಿದ್ದರು ಹಕ್ಕಿಗಳನ್ನು ಸೆಳೆಯುವಲ್ಲಿ ವಿಫಲವಾಗುತ್ತವೆ. ರಾಸಾಯನಿಕ ಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರ ಬಳಸಿ ಸಸಿಗಳನ್ನು ಬೆಳೆಸಬೇಕು, ಸಾವಯವ ಕೃಷಿಗೆ ಒತ್ತು ನೀಡಬೇಕು. ಇದೆಲ್ಲ ಮಾಡಲು ಪರಿಸರ ಉಳಿಸುವ, ಪ್ರಾಣಿ ಪಕ್ಷಿ ಬೆಳೆಸುವ ಒತ್ತಾಸೆ ಇರಬೇಕು. ಏನಂತಿರ?

ಲೇಖನ - ಪ್ರಶಾಂತ ಯಾವಗಲ್

Tuesday, May 17, 2011

ಕಾಡಿನಲ್ಲಿ ಬೆಂಕಿಯ ಬಲೆ

ದಟ್ಟ ಹಸಿರಾದ ಕಾಡುಗಳು ಬೇಸಿಗೆಯ ದಿನಗಳು ಸಮೀಪಿಸಿದಂತೆ ಒಣಗಿ ಬರಡಾಗಿ ನಿಂತಿವೆ. ಕಾಡಿನ ಹಳ್ಳ ಕೊಳ್ಳಗಳು, ತೊರೆಗಳು ಸೂರ್ಯನ ತಾಪಕ್ಕೆ ಬರಿದಾಗಿವೆ. ಒಣಗಿ ನಿಂತ ಕಾನನದ ಮಧ್ಯದಿಂದ ಬಿಳಿ ಹೊಗೆ ಮೋಡದಂತೆ ಮೇಲೇಳುತ್ತಿದೆ. ನೋಡನೋಡುತ್ತಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿ ಅಕಾಶದೆತ್ತರಕ್ಕೆ ತಲುಪಿದ ಹೊಗೆಯ ಸುತ್ತಲೂ ಪಕ್ಷಿಗಳು ಭಯದಿಂದ ಚೀತ್ಕರಿಸುತ್ತಾ ಹಾರಾಡುತ್ತಿವೆ. ಕಾಡಿನಿಂದ. ಆನೆಗಳು ಘೀಳಿಡುವ ಸದ್ದು ಇತರೆ ಪ್ರಾಣಿಗಳ ಕೂಗಿನೊಂದಿಗೆ ಬೆರೆತು ವಾತಾವರಣ ಭಯದಿಂದ ಕೂಡಿದೆ. ಬೆಂಕಿಯ ಕೆನ್ನಾಲಿಗೆಯು ಒಣಗಿದ ಹುಲ್ಲು, ಗಿಡಮರಗಳನ್ನಲ್ಲದೆ, ಸಣ್ಣಪುಟ್ಟ ಪ್ರಾಣಿಗಳು, ಸರೀಸೃಪಗಳು, ಪಕ್ಷಿಗಳೆಲ್ಲವನ್ನೂ ಜೀವಂತವಾಗಿ ದಹಿಸುತ್ತ ತನ್ನ ಹಸಿವನ್ನು ನೀಗಿಸಿಕೊಳ್ಳಲು ವೇಗವಾಗಿ ಹಬ್ಬುತ್ತಿದೆ. ಉರಿದುಹೋದ ಕಾಡಿನಲ್ಲಿ ಉಳಿದಿರುವುದು ಬರೀ ಹೊಗೆಯಾಡುತ್ತಿರುವ ಬೂದಿ. ಜೀವ ಸೆಲೆಯೇ ಉರಿದು ನಾಶವಾದಂತೆ ಕಾಣುತ್ತಿದೆ.  ಕಾಡ್ಗಿಚ್ಚು! ಪ್ರತೀ ಬೇಸಿಗೆಯಲ್ಲಿ ಅಪಾಯದ ಅಂಚಿನಲ್ಲಿರುವ ನಮ್ಮ ಕಾಡುಗಳಿಗೆ ಮರಣದೇಟಿನಂತೆ ಕಾಡುವ ಆಪತ್ತು!

ನಮ್ಮ ನಾಡಿನ ಕಾಡುಗಳು ಮಲೆನಾಡಿನ ದಟ್ಟ ಹಸಿರು ಕಾಡುಗಳು, ಎಲೆ ಉದುರುವ ಕಾಡುಗಳು, ಹಾಗು ಕುರುಚಲು ಕಾಡುಗಳಾಗಿ ವಿಂಗಡನೆಗೊಂಡು, ಸುಮಾರು 38000 ಚ.ಕಿಮೀಯಷ್ಟು (ಸುಮಾರು 20%) ಭೂಪ್ರದೇಶ ಹೊಂದಿವೆ. ವನ್ಯ ಪ್ರಾಣಿಗಳಿಗೆ ಆಶ್ರಯತಾಣಗಳಾಗಿ ಅಲ್ಲದೆ, ಗಿರಿಶೃಂಗಗಳಿಗೆ ಹಸಿರು ಹೊದಿಕೆಯ ಹೊದಿಸಿ, ಪ್ರಕೃತಿಯ ರಮಣೀಯತೆಯನ್ನು ಕಣ್ಮನಸ್ಸುಗಳಿಗೆ ತುಂಬುವ ಈ ಕಾಡುಗಳು ನೈಸರ್ಗಿಕ ಸಮತೋಲನಕ್ಕೆ ಅತ್ಯಂತ ಅವಶ್ಯಕ. ಕರ್ನಾಟಕದ ಪಶ್ಚಿಮಘಟ್ಟಗಳು ಹಾಗು ರಕ್ಷಿತಾರಣ್ಯಗಳಾದ ಬಂಡೀಪುರ, ನಾಗರಹೊಳೆ, ಅಣಶಿ ಮುಂತಾದ ಕಾಡುಗಳು ಹಲವಾರು ಪ್ರಾಣಿಪಕ್ಷಿಗಳಿಗೆ ಆಶ್ರಯತಾಣವಾಗಿವೆ. ವಿನಾಶದ ಅಂಚಿನಲ್ಲಿರುವ ಪ್ರಭೇದಗಳಾದ ಹುಲಿ, ಆನೆ, ಸಿಂಗಳೀಕ, ಕೆನ್ನಾಯಿ, ಮಂಗಟ್ಟೆ ಮುಂತಾದವುಗಳಲ್ಲದೆ, ಜಿಂಕೆ, ಕಡವೆ, ಕಾಡುಹಂದಿ, ಕರಡಿ ಮುಂತಾದ ಜಗತ್ತಿನ ಸುಮಾರು 22000 ಗುರುತಿಸಲ್ಪಟ್ಟಿರುವ ಹಾಗು ಸುಮಾರು 100000ದಷ್ಟು ಇನ್ನೂ ಗುರುತಿಸಬೇಕಾಗಿರುವ ಪ್ರಭೇಗಳು ಈ ಕಾಡುಗಳಲ್ಲಿವೆ. ಸುಮಾರು 120 ಸಸ್ತನಿಗಳು, 4500 ಹೂವಿನ ಗಿಡಗಳ ಪ್ರಭೇದಗಳು, ಸುಮಾರು 500 ಪಕ್ಷಿ ಪ್ರಭೇದಗಳು,  ಸುಮರು 160 ಸರೀಸೃಪ ಜಾತಿಗೆ ಸೇರಿದ ಪ್ರಾಣಿಗಳು, ಸುಮಾರು 180 ಮೀನಿನ ಪ್ರಭೇದಗಳು, 70 ಕಪ್ಪೆ ಪ್ರಭೇದಗಳು ನಮ್ಮ ನಾಡಿನ ಕಾಡುಗಳಲ್ಲಿ ನೆಲೆ ಕಂಡುಕೊಂಡಿವೆ.


ಆದರೆ, ನೆಮ್ಮದಿಯ ನೆಲೆಯಾಗಬೇಕಾದ ಈ ಕಾಡುಗಳು ಮಾನವನ ದುರಾಸೆ, ಮೂರ್ಖತನದಿಂದಾಗಿ ವಿನಾಶದತ್ತ ಸರಿಯುತ್ತಿವೆ. ಈ ಕಾಡುಗಳಿಗೆ ಹಾಗು ಇಲ್ಲಿ ವಾಸಿಸುವ ಪ್ರಾಣಿಗಳಿಗೆ ಇಂದು ಹಲವಾರು ಕಂಟಕಗಳು ಬಾಧಿಸುತ್ತಿವೆ. ಕಳ್ಳಬೇಟೆ, ಅತಿಕ್ರಮಣ, ವಾಸಸ್ಥಳ ನಾಶ, ಆಹಾರ ಕೊರತೆಯಂತಹ ಸಮಸ್ಯೆಗಳು ಇಂದು ಬೃಹತ್ತಾಗಿ ಬೆಳೆದುನಿಂತಿವೆ. ಈ ಪಟ್ಟಿಯಲ್ಲಿ ಸೇರುವ ಮತ್ತೊಂದು ಬೃಹತ್ ಸಮಸ್ಯೆಯೆಂದರೆ, 'ಕಾಡ್ಗಿಚ್ಚು'. ಬೇಸಿಗೆಯಲ್ಲಿ ಉದುರಿ ನಿಂತ ತರಗೆಲೆ, ಒಣಗಿದ ಹುಲ್ಲು, ಪೊದೆ ಹಾಗು ಗಿಡಮರಗಳನ್ನು ತನ್ನ ಕೆನ್ನಾಲಿಗೆ ಚಾಚುತ್ತಾ, ಅಗ್ನಿದೇವನು ತನ್ನ ಹವಿಸ್ಸನ್ನು ಸ್ವೀಕರಿಸುವಂತೆ ಬೆಂಕಿಯು ಕಾಡನ್ನು ಆಹುತಿ ತಗೆದುಕೊಳ್ಳುತ್ತದೆ. ನೂರಾರು ಎಕರೆ ಕಾಡು, ಅದರಲ್ಲಿರುವ ಪ್ರಾಣಿಗಳು ಪ್ರತಿ ಬೇಸಿಗೆಯಲ್ಲಿ ಕಾಡ್ಗಿಚ್ಚಿಗೆ ಬಲಿಯಾಗುತ್ತಿವೆ.


ದಟ್ಟವಾದ ಕಪ್ಪು ಹೊಗೆಯನ್ನು ಆಗಸದೆತ್ತರಕ್ಕೆ ಹರಡುತ್ತಾ ಗಾಳಿಬೀಸಿದಂತೆ ಕ್ಷಣಮಾತ್ರದಲ್ಲಿ ಹರಡುವ ಕಾಡ್ಗಿಚ್ಚಿನಲ್ಲಿ ವೈಜéಾನಿಕವಾಗಿ 2 ವಿಧ. ಮೊದಲನೆಯದಾಗಿ, ನೆಲಬೆಂಕಿ ಅಥವಾ ground fire . ಇದರಲ್ಲಿ ಎತ್ತರದ ಮರಗಿಡಗಳು ಸುಡುವುದಿಲ್ಲ. ಒಣಗಿದ ತರಗೆಲೆ, ಹುಲ್ಲು, ಸಣ್ಣಪುಟ್ಟ ಪೊದೆಗಳು, ಲಾಂಟಾನ, ಹಾಗು ಸಣ್ಣ ಪ್ರಾಣಿಗಳು ಬಲಿಯಾಗುತ್ತವೆ. ಗಾಳಿ ಹಾಗು ಒಣಗಿದ ವಸ್ತು ಸಿಕ್ಕಂತೆ ಇದು ನೆಲಮಟ್ಟದಲ್ಲಿ ವೇಗವಾಗಿ ಹರಡುತ್ತದೆ. ಎರಡನೆಯದು ಮರಗಳ ಸಮೂಹದ ತುದಿಯಲ್ಲಿ ಹರಡುವ ಬೆಂಕಿ (crown fire). ಇದು ಕೂಡ ಗಾಳಿ ಹಾಗು ಉರಿವ ವಸ್ತುಗಳು ಸಿಕ್ಕಂತೆ ದಟ್ಟವಾದ ಕಾಡುಗಳಲ್ಲಿ ಬಹು ವೇಗವಾಗಿ ಹರಡುತ್ತದೆ. ಆದರೆ ಇದರಲ್ಲಿ ಕಾಡಿನ ಎತ್ತರದ ಮರಗಳೂ ಹಾಗು ದೊಡ್ಡ ದೊಡ್ಡ ಪ್ರಾಣಿಗಳೂ ಬಲಿಯಾಗುವುದಿದೆ.

ಇನ್ನು ಬೆಂಕಿಯ ಮೂಲದ ಆಧಾರದಲ್ಲಿ 2 ವಿಧಗಳಿವೆ. ನೈಸಗರ್ಿಕ ಕಾಡ್ಗಿಚ್ಚು ಹಾಗು ಮಾನವ ನಿಮರ್ಿತ ಕಾಡ್ಗಿಚ್ಚು. ಒಣವಸ್ತುಗಳಿಗೆ ಮಿಂಚು ಬಡಿಯುವುದರಿಂದ ಅಥವಾ ಅಧಿಕ ತಾಪಮಾನ ಹಾಗು ಒತ್ತಡದಲ್ಲಿ ಒಣಗಿದ ವಸ್ತುಗಳ ಮಧ್ಯೆ ಉಂಟಾಗುವ ಘರ್ಷಣೆ ಬೆಂಕಿಯ ಜನ್ಮಕ್ಕೆ ನೈಸಗರ್ಿಕವಾಗಿ ಕಾರಣವಾಗಬಹುದು. ಮಿಂಚಿನಿಂದ ಬೆಂಕಿ ಬಿದ್ದರೆ ನಂತರ ಸುರಿಯುವ ಮಳೆಯೇ ಬಹಳಷ್ಟು ಪ್ರಕರಣಗಳಲ್ಲಿ ಕಾಡ್ಗಿಚ್ಚನ್ನು ನಂದಿಸಿಬಿಡುತ್ತದೆ. ಆದರೆ ನಮ್ಮ ನಾಡಿನ ಕಾಡುಗಳಲ್ಲಿ ನೈಸಗರ್ಿಕವಾಗಿ ಉಂಟಾಗುವ ಬೆಂಕಿ ಇಲ್ಲವೇ ಇಲ್ಲವೆಂದು ಹೇಳಬಹುದು. ಇನ್ನು ಎರಡನೆಯದು ಮಾನವನಿಂದುಂಟಾಗುವ ಬೆಂಕಿ. ಇಲ್ಲಿ ಮಾನವನ ದುರಾಸೆಯೇ ಬೆಂಕಿಯ ಮೂಲಗಳು. ಕಾಡಿಗೆ ಬೆಂಕಿ ಹಚ್ಚಿ ಹೆದರಿ ಓಡುವ ಪ್ರಾಣಿಗಳನ್ನು ಬೇಟೆಯಾಡಲು ಕಳ್ಳಬೇಟೆಗಾರರು ಪ್ರಯತ್ನ ನಡೆಸುವುದಿದೆ. ಒಂದೆಡೆ ಉರುಳು ಹಾಕಿ ಇನ್ನೊಂದೆಡೆಯಿಂದ ಬೆಂಕಿ ಹಚ್ಚಿ ಪ್ರಾಣಿಗಳನ್ನು ಉರುಳಿನೆಡೆಗೆ ಓಡಿಸಿವ ತಂತ್ರವನ್ನು ಬೇಟೆಗಾರರು ಉಪಯೋಗಿಸುತ್ತಾರೆ. ಅಲ್ಲದೆ, ಇಲಾಖೆಯ ಗಮನವನ್ನು ಬೆಂಕಿಯೆಡೆಗೆ ಸೆಳೆದು ಇನ್ನೊಂದೆಡೆ ಬೇಟೆಗೆ ಹೊಂಚುಹಾಕುವ ಕಳ್ಳನೆಪವೂ ಇರುತ್ತದೆ.

ಬಹಳ ಹಿಂದಿನಿಂದಲೂ ಕಾಡುಗಳು ಅದರ ಸುತ್ತಲಿನ ಹಳ್ಳಿಗಳ ಆಕಳುಗಳಿಗೆ ಮೇವಿನ ತಾಣಗಳಾಗಿವೆ. ಇಂದು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿದಿನವೂ ಸುಮಾರು 12000ಕ್ಕೂ ಅಧಿಕ ಜಾನುವಾರುಗಳು ಮೇವಿಗಾಗಿ ಪ್ರವೇಶಿಸುತ್ತವೆ. ಈ ಜಾನುವಾರುಗಳ ಮೇವಿಗೆ ಹೊಸ ಚಿಗುರು ಬೆಳೆಯಲೆಂದು ದನಗಾಹಿಗಳು ಕಾಡಿಗೆ ಬೆಂಕಿಯಿಡುವುದುಂಟು. ಹೀಗೆ ಪ್ರವೇಶಿಸುವ ಪ್ರಾಣಿಗಳಿಂದ ಅರಣ್ಯವಾಸಿಗಳಿಗೆ ಮೇವಿನಕೊರತೆ ಉಂಟಾಗುವುದಲ್ಲದೆ ಕಾಲುಬಾಯಿ ರೋಗದಂತಹ ಪ್ರಾಣಾಂತಿಕ ರೋಗಗಳೂ ಕಾಡಿನಲ್ಲಿ ಹರಡುತ್ತವೆ. ಇದಲ್ಲದೆ ಅರಣ್ಯ ಉತ್ಪನ್ನಗಳಾದ ನೆಲ್ಲಿಕಾಯೆ, ಜೇನು, ಮಹುವ ಮುಂತಾದವನ್ನು ಸಂಗ್ರಹಿಸುವವರು ಅವುಗಳನ್ನು ಸಂಗ್ರಹಿಸಲು ಅನುಕೂಲವಾಗಲೆಂದು ಬೆಂಕಿಹಚ್ಚುವುದುಂಟು. ಇವಿಷ್ಟೇ ಅಲ್ಲದೆ ಇಲಾಖೆಯಮೇಲಿನ ಸೇಡಿನಿಂದ ಅಥವಾ ಕಳ್ಳ ಒತ್ತುವರಿ ಮಾಡುವ ಭೂದಾಹಿಗಳು ಕಾಡಿಗೆ ಬೆಂಕಿಯಿಡುವ ಪ್ರಕರಣಗಳೂ ಇವೆ. ಕೆಲವೊಮ್ಮೆ ನಿರ್ಲಕ್ಷತನದಿಂದ ಎಸೆದ ಬೀಡಿ ಅಥವಾ ಇನ್ಯಾವುದೋ ಉರಿಯುವ ವಸ್ತು ಕೂಡ ಬೃಹತ್ ಪ್ರಮಾಣದಲ್ಲಿ ಕಾಡಿನ ನಾಶಕ್ಕೆ ಕಾರಣವಾಗಬಹುದು. ಅರಣ್ಯ ಕಾಯ್ದೆಯ ಪ್ರಕಾರ ಕಾಡಿನಲ್ಲಿ ಹಾಗು ಕಾಡಿನ ಅಂಚಿನಿಂದ 180 ಮೀ ಸುತ್ತಳತೆಯವರೆಗೂ ನವೆಂಬರ್ ತಿಂಗಳಿನಿಂದ ಜೂನ್ವರೆಗೂ ಪೂರ್ವಾನುಮತಿಯಿಲ್ಲದೆ ಬೆಂಕಿಹಚ್ಚುವುದು ಅಪರಾಧವಾಗುತ್ತದೆ.

ಕಾಡಿನಲ್ಲಿ ಉಂಟಾಗುವ ಬೆಂಕಿಯಿಂದ ಕಾಡಿಗೆ, ಕಡುಪ್ರಾಣಿಗಳಿಗೆ ಅಗುವ ಹಾನಿ ಅಪಾರ. ಹುಲ್ಲು, ಎಲೆ, ಸಣ್ಣಪುಟ್ಟ ಗುಡಮರಗಳು ಬೆಂಕಿಯಲ್ಲಿ ಉರಿದು ಹೋಗುವುದರಿಂದ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರವಿಲ್ಲದಂತಾಗುತ್ತದೆ. ಬೇಸಿಗೆಯ ಬೇಗೆಯಲ್ಲಿ ಮೊದಲೇ ಬಸವಳಿದ ಪ್ರಾಣಿಗಳು ಆಹಾರ ಕೊರತೆ ಹಾಗು ಬೆಂಕಿಯ ತಾಪದಿಂದ ತಪ್ಪಿಸಿಕೊಳ್ಳಲು ನಾಡಿನೆಡೆಗೆ, ರೈತರ ಬಳೆಯೆಡೆಗೆ ನುಗ್ಗುತ್ತವೆ. ರೈತರ ಹೊಲಗಳಿಗೆ ಕಾಡುಪ್ರಾಣಿಗಳ ದಾಳಿ ಹೆಚ್ಚಾಗಲು ಕಾಡ್ಗಿಚ್ಚು ಪ್ರಮುಖ ಕಾರಣ. ಇದಲ್ಲದೆ ಸಣ್ಣಸಣ್ಣ ಪ್ರಾಣಿಗಳು, ಸರೀಸೃಪಗಳು, ಪಕ್ಷಿಗಳು, ಕೀಟಗಳು ಹಾಗು ಪ್ರಕೃತಿಯ ಸಮತೋಲನದಲ್ಲಿ ಪ್ರಮುಖಪಾತ್ರವಹಿಸುವ ಜೀವಜಂತುಗಳು ನಾಶವಾಗುಹೋಗುತ್ತವೆ.

ಕಾಡ್ಗಿಚ್ಚು, ಅದರಲ್ಲೂ ನಮ್ಮ ಕಡುಗಳಲ್ಲಿ ಕಂಡುಬರುವ ನೆಲಬೆಂಕಿ, ಬೆಳೆಯುವ ಕಾಡಿಗೆ ಬಹಳ ಮಾರಕವಾದದ್ದು. ನೆಲಕ್ಕುದುರಿ, ಚಿಗುರಲು ಮಳೆಗಾಗಿ ಕಾದುನಿಂತ ಬೀಜಗಳು, ಚಿಗುರಿನಿಂತ ಸಸ್ಯಗಳು, ಸಣ್ಣಪುಟ್ಟ ಗಿಡಮರಗಳು ಬೆಂಕಿಯಲ್ಲಿ ನಾಶವಾಗುತ್ತವೆ. ಅಲ್ಲದೆ, ಬೆಂಕಿಯನ್ನು ತಡೆಯುವ ಸಾಮಥ್ರ್ಯವುಳ್ಳ ಪ್ರಭೇದಗಳು ಹೆಚ್ಚಾಗಿ ಕಾಡಿನ ವೈವಿಧ್ಯತೆ ನಾಶವಾಗುತ್ತದೆ. ಲಾಟಾನ, ಪಾಥರ್ೆನಿಯಂನಂತಹ ಕಳೆಗಳು ಹೆಚ್ಚಾಗಿ ಕಾಡಿಗೆ, ಕಡುಪ್ರಾಣಿಗಳಿಗೆ ಮಾರಕವಗುತ್ತದೆ. ಹಲವು ಬಾರಿ ಬೆಂಕಿಯಲ್ಲಿ ಉರಿದ ಕಾಡಿನಲ್ಲಿ ಚಿಗುರು ಮರಗಳು, ಸಸ್ಯಗಳು ಇಲ್ಲದೆ ವಯಸ್ಸಾದ ಮರಗಳು ಮಾತ್ರ ಉಳಿದಿರುತ್ತವೆ. ಈ ವಯಸ್ಸಾದ ಮರಗಳು ಉರುಳಿದಂತೆ ಮತ್ತೆ ಚಿಗುರುವ ಸಸ್ಯಗಳಿಲ್ಲದೆ ಕಾಡು ನಾಶವಾಗುತ್ತದೆ.

ಪ್ರತಿ ವರ್ಷವೂ ನಮ್ಮ ನಾಡಿನ ಕಾಡುಗಳಲ್ಲಿ ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರ ಅರಣ್ಯ ಮತ್ತು ಪ್ರಕೃತಿ ಸಚವಾಲಯದ ಪ್ರಕಾರ ಭಾರತದಾದ್ಯಂತ 2009ರಲ್ಲಿ ಒಟ್ಟು ಸುಮಾರು 26118 ಕಾಡ್ಗಿಚ್ಚಿನ ಪ್ರಕರಣಗಳು ವರದಿಯಾಗಿವೆ. 2005ರಲ್ಲಿ ಇದ್ದ ಇದರ ಸಂಖ್ಯೆ ಸುಮಾರು 8431.

ಅರಣ್ಯ ಇಲಾಖೆ ಕಾಡ್ಗಿಚ್ಚನ್ನು ತಡೆಯಲು ಹಾಗು ಅದನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಬೇಸಿಗೆ ಸಮೀಪಿಸಿದಂತೆ ವೀಕ್ಷಣಾತಂಡಗಳನ್ನು ರಚಿಸಿ ಕಾಡಿನಮೇಲೆ ನಿಗಾವಹಿಸುವುದು, ಬೀಟ್ಗಳನ್ನು ಹೆಚ್ಚಿಸುವುದು, ಕಾಡ್ಗಿಚ್ಚು ಹರಡದಂತೆ ತಡೆಯಲು ಕಾಡನ್ನು ವಿಂಗಡಿಸುವುದು ಹಾಗು ಬೆಂಕಿ ಬಿದ್ದಾಗ ಅದರ ಜಾಗವನ್ನು ಶೀಘ್ರವಾಗಿ ಗುರುತಿಸಿ ಅಲ್ಲಿಗೆ ತಂಡಗಳು ತಲುಪಿ ನಂದಿಸಲು ವ್ಯವಸ್ಥಿತವಾದ ಯೊಜನೆಗಳನ್ನು ರೂಪಿಸುತ್ತದೆ. ಆದರೂ, ಬೆಂಕಿ ಬಿದ್ದಾಗ ಇಲಾಖೆಯ ಜನರು ಪಡುವ ಪಾಡು ಅಷ್ಟಿಷ್ಟಲ್ಲ. ಕಾಡಿನ ಯಾವುದೇ ಮೂಲೆಯಲ್ಲಿ ಬೆಂಕಿಬಿದ್ದರೂ ದುರ್ಗಮವಾದ ಕಾಡುಹಾದಿಗಳಲ್ಲಿ ಅದನ್ನು ನಂದಿಸಲು ತೆರಳಬೇಕು, ಬಹಳಷ್ಟುಸಲ ಬಹುದೂರ ಕಾಲ್ನಡಿಗೆಯಲ್ಲಿ, ಕಲ್ಲು ಮುಳ್ಳುಗಳಹಾದಿಯಲ್ಲಿ, ಗುಡ್ಡಗಳನ್ನು ಏರಿತ್ತಾ ಶೀಘ್ರವಾಗಿ, ಪ್ರಾಣಿಗಳ ಭಯವಿದ್ದರೂ ಪ್ರಾಣವನ್ನು ಲೆಕ್ಕಿಸದೆ ಬೆಂಕಿಯೊಂದಿಗೆ ಹೋರಾಡಬೇಕು. ಎಕರೆಗಟ್ಟಲೆ ಪ್ರದೇಶಕ್ಕೆ ಬೆಂಕಿ ಬಿದ್ದರೂ ಅದನ್ನು ನಂದಿಸಲು ಸಿಗುವುದು ಬೆರಳೆಣಿಕೆಯಷ್ಟು ಜನರು ಮಾತ್ರ. ಕಷ್ಟಪಟ್ಟು ಅಲ್ಲಿಗೆ ತಲುಪಿದರೂ ಬೆಂಕಿಯನ್ನು ನಂದಿಸಲು ಅವರಲ್ಲಿ ಸರಿಯಾದ ಸಲಕರಣೆಗಳು ಇರುವುದಿಲ್ಲ. ಗಿಡಗಳ ಸಣ್ಣಸಣ್ಣ ರೆಂಬೆಕೊಂಬೆ, ಸೊಪ್ಪುಸೆದೆಗಳನ್ನು ಮುರಿದುಕೊಂಡು ಬೆಂಕಿಯನ್ನು ಹೊಡೆಯುತ್ತಾ ನಂದಿಸಲು ಪ್ರಯತ್ನಿಸುತ್ತಾರೆ. ಗಾಳಿ ಬೀಸಿದಂತೆ ಕ್ಷಣಮಾತ್ರದಲ್ಲಿ ಸುತ್ತಲೂ ಹಬ್ಬುವ ಬೆಂಕಿಯಿಂದ ಕೆಲವೊಮ್ಮೆ ಪ್ರಾಣಕ್ಕೂ ಅಪಾಯವಿದೆ. ಕಷ್ಟಪಟ್ಟು ಬೆಂಕಿನಂದಿಸುವ ಪ್ರಯತ್ನಮಾಡಿದರೂ ಅವರಿಗೆ ನೀರಾಗಲೀ, ಕೈಗವಸಾಗಲೀ, ಬೆಂಕಿನಿರೋಧಕ ಬಟ್ಟೆಯಾಗಲೀ ಅಥವಾ ಸಹಾಯಕ್ಕೆ ಇನ್ನೊಂದು ತಂಡವಾಗಲೀ ಇರುವುದಿಲ್ಲ. ಏನೇ ಆದರೂ ಬೆಂಕಿಯೊಂದಿಗೆ ಹೋರಾಡಿ ಗೆಲ್ಲಲೇಬೇಕು, ಕಾಡನ್ನು, ಕಾಡುಪ್ರಾಣಿಗಳನ್ನು, ರಕ್ಷಿಸಲೇಬೇಕು.



ಹೀಗೆ ಬೆಂಕಿಯೊಂದಿಗೆ ಸೆಣಸುವ ಮಂದಿಯಲ್ಲಿ ಬಹಳಷ್ಟು ಜನ ಇಲಾಖೆಯಲ್ಲಿ ಕಾಯಂ ಅಲ್ಲದ, ದಿನಗೂಲಿಗಾಗಿ ಕೆಲಸ ಮಾಡುವ ವೀಕ್ಷಕರು. ಬರಿಗಾಲಿನಲ್ಲಿ ಕಾಡು ಅಲೆದು, ಕಳ್ಳರೊಂದಿಗೆ, ಬೇಟೆಗಾರರೊಂದಿಗೆ ಸೆಣಸುವ ಇವರದ್ದು ಇಲಾಖೆಯಲ್ಲಿ ತೀರ ನಿರ್ಲಕ್ಷಕ್ಕೊಳಗಾದ ವರ್ಗ. ಕಡಿಮೆ ಸೌಲಭ್ಯದಲ್ಲಿ ಹೆಚ್ಚು ಕೆಲಸ ಮಾಡಿದರೂ ಸಿಗುವ ಸಂಬಳ ಸುಮಾರು 3400 ರೂ, ಅದೂ ಕೆಲವು ತಿಂಗಳಿಗೊಮ್ಮೆ ಕೈಸೇರುತ್ತದೆ. ಅಷ್ಟರಲ್ಲೇ ಅವರ ಸಂಸಾರ, ಮಕ್ಕಳ ಶಿಕ್ಷಣ ಎಲ್ಲವೂ ನಡೆಯಬೇಕು. ಕರ್ತವ್ಯದ ಸಮಯದಲ್ಲಿ ಪ್ರಾಣ ಕಳೆದುಕೊಂಡರೂ ಇವರಿಗೆ ವಿಮೆಯಾಗಲೀ, ಪರಿಹಾರವಾಗಲೀ ಇಲ್ಲ. ಇವರ ನಂತರ ಬರುವ ಗಾರ್ಡಗಳ ಸ್ಥಿತಿಯೇನೂ ಹೇಳಿಕೊಳ್ಳುವಂತಹದ್ದಲ್ಲ. ಇಂದು ಒಬ್ಬ ಗಾರ್ಡ ಸುಮಾರು 5000 ಎಕರೆಯಷ್ಟು ಕಾಡನ್ನು ಕಳ್ಳಕಾಕರಿಂದ, ಬೇಟೆಗಾರರಿಂದ ಹಾಗು ಕಾಡ್ಗಿಚ್ಚಿನಿಂದ ರಕ್ಷಿಸಬೇಕಿದೆ. ಸುಮಾರು 900 ಚ.ಕಿಮೀಯಷ್ಟು ವ್ಯಾಪಿಸಿರುವ ದಾಂಡೇಲಿಯಂಥ ಕಾಡನ್ನು ರಕ್ಷಿಸಲು ಇರುವ ವೀಕ್ಷಕರ ಸಂಖ್ಯೆ ಕೇವಲ 4! ನಾಗರಹೊಳೆಯಂತಹ ರಕ್ಷಿತಾರಣ್ಯದಲ್ಲಿ ಇಂದು 50%ಕ್ಕಿಂತಲೂ ಅಧಿಕ ಗಾರ್ಡ ಹಾಗು ವೀಕ್ಷಕರ(ವಾಚರ್) ಹುದ್ದೆಗಳು ಖಾಲಿ ಇವೆ. ಹೀಗೆ ಸೌಲಭ್ಯ ಹಾಗು ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಅರಣ್ಯ ಇಲಾಖೆಗೆ ಕಾಡ್ಗಿಚ್ಚು ಒಂದು ಸವಾಲಾಗಿ ಪರಿಣಮಿಸಿದೆ.



ಇಂದು ನಮ್ಮ ಅಮೂಲ್ಯ ಕಾಡುಗಳನ್ನು ಹಾಗು ಕಾಡುಪ್ರಾಣಿಗಳನ್ನು ಕಾಡ್ಗಿಚ್ಚಿನ ಅಪಾಯದಿಂದ ಪಾರುಮಾಡಬೇಕಿದೆ. ಇದಕ್ಕಾಗಿ ಕಾಡಿನ ಸುತ್ತಲೂ ವಾಸಿಸುವ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಅರಣ್ಯ ಇಲಾಖೆ ಹಾಗು ಸ್ವಯಂಸೇವಾ ಸಮಸ್ಥೆಗಳು ಇದನ್ನು ಗುರಿಯಾಗಿಟ್ಟುಕೊಂಡು ಕಾರ್ಯಮಗ್ನವಾಗಬೇಕಿದೆ. ಕಾಡುಗಳ ಅವಶ್ಯಕತೆ, ಅದಕ್ಕೆ ಬೆಂಕಿ ಹಚ್ಚುವುದರಿಂದಾಗುವ ಪರಿಣಾಮ, ಬೇಟೆಗಾರರ ದುರಾಸೆ ಹಾಗು ಉಳಿದಿರುವ ಕಾಡನ್ನು ಉಳಿಸಲು ಮಾಡಬೇಕಿರುವ ಕೆಲಸದಬಗ್ಗೆ ಜನರ ಮನತಟ್ಟುವಂತೆ ತಿಳಿಹೇಳಬೇಕಿದೆ. ಹಾಗೆಯೇ ಇಲಾಖೆಯು ಕಾಡಿನಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸಲು ಹಾಗು ಅದರ ವಿರುದ್ಧ ಕಾಡನ್ನು ರಕ್ಷಿಸಲು ತನ್ನ ಸಾಮಥ್ರ್ಯವನ್ನು ಬಲಪಡಿಸಿಕೊಳ್ಳಬೇಕು. ಉಳಿದಿರುವ ಖಾಲಿ ಹುದ್ದೆಗಳನ್ನು ತುಂಬುವುದು, ಕಾಡ್ಗಿಚ್ಚನ್ನು ತಡೆಗಟ್ಟಲು ವೈಜéಾನಿಕ ವಿಧಾನಗಳನ್ನು ಅನುಸರಿಸುವುದು, ಕಾಡಿನ ಸುತ್ತಲೂವಾಸಿಸುವ ಜನರ ವಿಶ್ವಾಸಗಳಿಸಿ ಕೆಲಸಮಾಡುವುದು ಹಾಗು ಸ್ವಯಂಸೇವಾ ಸಮಸ್ಥೆಗಳ ಸೇವೆಯನ್ನು ಬಳಸಿಕೊಳ್ಳುವ ಕೆಲಸ ಶೀಘ್ರವಾಗಿ ಆಗಬೇಕು. ಇದಲ್ಲದೆ ಜನಸಾಮಾನ್ಯರೂ ತಮ್ಮ ಸಮಥ್ರ್ಯಕ್ಕನುಗುಣವಾಗಿ ಕಾಡನ್ನು ರಕ್ಷಿಸುವ ಕಾರ್ಯದಲ್ಲಿ ಕೈಜೋಡಿಸಬೇಕು. ಏಕೆಂದರೆ ಕಾಡು ಬರೀ ಅರಣ್ಯ ಇಲಾಖೆಯ ಸ್ವತ್ತಲ್ಲ. ಅದು ನಮ್ಮೆಲ್ಲರ ಕಾಡು. ನಮ್ಮ ಜೀವನಕ್ಕೆ, ಬದುಕಿಗೆ ಅತ್ಯವಶ್ಯಕವಾದ ಕಾಡು. ಅದನ್ನು ಉಳಿಸುವ, ಬೆಳೆಸುವ ಬದುಕಿಸುವ ಜವಾಬ್ದಾರಿ ನಮ್ಮೆಲ್ಲರ ಹೆಗಲಮೇಲಿದೆ.

ಮಾಹಿತಿ ಮೂಲ: "ಕಾಡು ಉಳಿಸುವ ಬರಿಗಾಲಿನ ಯೋಧರು", ಸಂಜಯ ಗುಬ್ಬಿ
ಚಿತ್ರಗಳು: ಅರಣ್ಯ ವೈಲ್ಡೆಲೈಫ್ ಟ್ರಸ್ಟ್, ವೈಲ್ಡ್ಲೈಫ್ ಕನ್ಸರ್ವೇಶನ್ ಸೊಸೈಟಿ, ಬೆಂಗಳೂರು

ಲೇಖನ - ಹರೀಶ ಏನ್.ಎಸ್.
ಈ ಲೇಖನದ ಆಯ್ದ ಭಾಗವು ವಿಜಯ ಕರ್ನಾಟಕ ಪತ್ರಿಕೆಯ "ಸಂಪಾದಕೀಯ" ವಿಭಾಗದಲ್ಲಿ ದಿನಾಂಕ ೧೬ ಏಪ್ರಿಲ್ ೨೦೧೧ ರಂದು ಪ್ರಕಟವಾಗಿತ್ತು.